ಭೋಪಾಲ್: ‘ಕಾಂಗ್ರೆಸ್ಸಿಗರು ಬೆಂಕಿ ಹಚ್ಚುವಲ್ಲಿ ನಿಸ್ಸಿಮರು. ಹೀಗಾಗಿ, ಧೈರ್ಯವಿದ್ದರೆ ನನ್ನನ್ನು ಜೀವಂತ ದಹನ ಮಾಡಲಿ’ ಎಂದು ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಸವಾಲು ಹಾಕಿದ್ದಾರೆ.

‘ಮಧ್ಯಪ್ರದೇಶದ ಬ್ಯಾವರಾ ವಿಧಾನಸಭಾ ಕ್ಷೇತ್ರಕ್ಕೆ ಪ್ರಜ್ಞಾ ಸಿಂಗ್ ಕಾಲಿಟ್ಟರೆ ಜೀವಂತವಾಗಿ ದಹನ ಮಾಡುತ್ತೇವೆ’ ಎಂದು ಕಾಂಗ್ರೆಸ್ ಶಾಸಕ ಗೋವರ್ಧನ್ ದಾಂಗಿ ಇತ್ತೀಚೆಗೆ ಹೇಳಿಕೆ ನೀಡಿದ್ದರು. ಈ ಬಗ್ಗೆ ಟೀಕೆಗಳು ವ್ಯಕ್ತವಾದ ಬಳಿಕ ಶಾಸಕ ದಾಂಗಿ, ವಿಷಾದ ವ್ಯಕ್ತಪಡಿಸಿ ಗಾಂಧೀಜಿಯ ಅಹಿಂಸಾ ತತ್ವ ಪಾಲಿಸುವುದಾಗಿ ಹೇಳಿದ್ದರು.

ಶಾಸಕರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಪ್ರಜ್ಞಾ ಸಿಂಗ್, ‘ರಾಜಗಢ ಜಿಲ್ಲೆಯ ಬ್ಯಾವರಾಗೆ ಡಿಸೆಂಬರ್ 8ರಂದು ಸಂಜೆ ನಾಲ್ಕು ಗಂಟೆಗೆ ಬರುತ್ತಿದ್ದೇನೆ. ನನ್ನನ್ನು ದಹನ ಮಾಡಿ’ ಎಂದು ಕಟುವಾಗಿ ಟ್ವೀಟ್ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.